Wednesday, 9 July 2008

ಸ್ವತಂತ್ರ ಭಾರತದ ನಾಣ್ಯಗಳು

ಮಹಾತ್ಮ ಗಾಂಧೀಜಿಯವರ ಮುಂದಾಳತ್ವದಲ್ಲಿ ಅಹಿಂಸಾ ಮಂತ್ರದ ಮೂಲಕ 1947ರಲ್ಲಿ ಭಾರತ ಬ್ರಿಟಿಷರಿಂದ ಸ್ವತಂತ್ರವಾಯಿತು. 1950ರಲ್ಲಿ ಸೌರ್ವಭೌಮ ಗಣರಾಜ್ಯವಾಗುವವರೆಗೆ ಭಾರತದಲ್ಲಿ ಬ್ರಿಟಿಷರು ಚಲಾವಣೆಗೆ ತಂದಿದ್ದ ನಾಣ್ಯಗಳನ್ನು ಮುಂದುವರಿಸಲಾಯಿತು. ಭಾರತ 1950ನೇ ಆಗಸ್ಟ 15ರಂದು ಮೂರನೆ ಸ್ವಾತಂತ್ರೋತ್ಸವದಂದು ತನ್ನದೇ ಆದ ನಾಣ್ಯಗಳನ್ನು ಮುದ್ರಿಸಿ ಬಿಡುಗಡೆಗೊಳಿಸಿತು. ಈ ನಾಣ್ಯಗಳನ್ನು ಬ್ರಿಟಿಷರು ಜಾರಿಗೊಳಿಸಿದ್ದ ಬೆಲೆ, ಅಳತೆ, ಧಾತು ಮತ್ತು ರಚನೆಯ ಆಧಾರದ ಮೇಲೆ ಮುದ್ರಿಸಲಾಗಿತ್ತು, ಆಕಾರದಲ್ಲಿ ಮಾತ್ರ ಪೂರ್ಣ ಬದಲಾವಣೆಗೊಂಡವು.
ಒಂದು ಪೈಸೆಯಿಂದ ಒಂದು ರೂಪಾಯಿ ಮೌಲ್ಯದವರೆಗೆ ಬ್ರಿಟಿಷ ನಾಣ್ಯಗಳಿದ್ದ ರಾಜರ ಭಾವಚಿತ್ರವನ್ನು ಬದಲಾಯಿಸಿ ಸಾರನಾಥದಲ್ಲಿರುವ ಅಶೋಕ ಸ್ಥಂಭವನ್ನು ಅಳವಡಿಸಲಾಯಿತು. ಈ ಗುರುತು ಅಹಿಂಸೆ, ಶಾಂತಿ ಹಾಗೂ ಚಲನೆಯ ಪ್ರತೀಕವಾಗಿ ಭಾರತದ ಲಾಂಚನವಾಯಿತು.



ಭಾರತ ಸ್ವಾತಂತ್ರ್ಯದ ಮೇಲೆ ಕ್ವಾಟ್ರನೇರಿ ಪಧ್ಧತಿಯಲ್ಲಿ ತೊಂದರೆಯನ್ನು ಮನಗಂಡು ಮೆಟ್ರಿಕ್ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಮೊದಲನೆಯ ವ್ಯವಸ್ಥೆಯಲ್ಲಿ 1 ರೂಪಾಯಿಗೆ 64 ಪೈಸೆ ಮೊತ್ತವಾಗಿತ್ತು. ಆದರೆ ಮೆಟ್ರಿಕ್ ಪದ್ಧತಿಯಲ್ಲಿ 1ರೂಪಾಯಿಗೆ 1೦೦ ಪೈಸೆಯ ಮೊತ್ತಕ್ಕೆ ಸಮಾನವಾಗಿತ್ತು.ನಂತರ ಭಾರತ ಸರ್ಕಾರವು ವಿವಿಧ ಲೋಹ ಮತ್ತು ವಿವಿಧ ಆಕೃತಿಯ ನಾಣ್ಯಗಳನ್ನು ಟಂಕಿಸಲು ಪ್ರಾರಂಭಿಸಿತು.

ಭಾರತವು ನಾಲ್ಕು ಟಂಕಸಾಲೆಗಳನ್ನು ಹೊಂದಿದ್ದು ಅವುಗಳು.


1) ಕೊಲ್ಕತ್ತಾ


2) ಮುಂಬಯಿ


3) ನೋಯ್ಡಾ


4) ಹೈದರಾಬಾದ